ವಾರದ ಕವಿತೆ

ಹೊಸ್ತಿನ ಹಗಲು ಫಾಲ್ಗುಣ ಗೌಡ ಅಚವೆ ಬಯಲು ಗದ್ದೆಯ ಹೊಸ ಭತ್ತದ ಕದರುರೈತರ ಬೆವರ ಬಸಿಯುವ ಕಯಿಲುಕಂಬಳಕಿಂಪಿನ ಪಾಂಗಿನ ಅಮಲುಹೊಡತಲೆ ಹಗಣದ ಕವಳದ ಸಾಲುಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಮೊನೆಯಲಿ ಸಸಿಬುಡ ಬೇರುಕದರಿನ ನಡುವಲಿ ಗಂಧದ ಹೂವುಮಣ್ಣಲಿ ಹುದುಗಿದ ಎರೆಹುಳ ಪಾಡುಹರಡಿದ ಗಿಣಿಗಳ ಹಾಡಿನ ಜಾಡುಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲುಕೆಂದರಕಿ ಹೂವಿನ ಕಮಾನು ಹೊಸಿಲುಹೂಡುವ ಎತ್ತಿನ ಅಡಸಲ ಕವಲುಹೂನೀರಾಡಿದ ಹೊಸ ಭತ್ತದ ತೆನೆಗಳುಆಚರಿಸುತಿದೆ ಹೊಸ್ತಿನ ಹಗಲು. ಒಳಗಿನ ಅಕ್ಕಿಯ ಮಡಕೆಯ ಕೊರಳುಅಂಗಳದಲ್ಲಿನ ಒನಕೆಯ … Continue reading ವಾರದ ಕವಿತೆ